ಕಲಿಕೆಯ ಫಲಿತಗಳು
ಕನ್ನಡ ವಿಭಾಗ

ಮೊದಲನೇ ಸೆಮಿಸ್ಟರ್
• ಸಾಹಿತ್ಯ ಚರಿತ್ರೆಯನ್ನು ಮೊಟ್ಟಮೊದಲು ವಿದ್ಯಾರ್ಥಿಗಳಿಗೆ ಓದಿಸುವ ಉದ್ದೇಶ ನಮ್ಮದು. ಕನ್ನಡ ಸಾಹಿತ್ಯ ಚರಿತ್ರೆಯ ಸ್ವರೂಪ, ಉದ್ದೇಶ , ಕವಿರಾಜಮಾರ್ಗ, ವಡ್ಡಾರಾಧನೆ, ಚಂಪೂ ಸಾಹಿತ್ಯ , ವಚನಗಳು , ಕೀರ್ತನೆ , ತತ್ವಪದ ,ರಗಳೆ ,ಷಟ್ಪದಿ , ಸಾಂಗತ್ಯ , ತ್ರಿಪದಿ ಮುಂತಾದವುಗಳ ವಿಷಯಗಳ ಪರಿಚಯ , ಜೊತೆಗೆ ಇವುಗಳಿಗೆ ಸಂಬAಧಿಸಿದAತೆ ನಿರ್ದಿಷ್ಟ ಪಠ್ಯವನ್ನು ವಿದ್ಯಾರ್ಥಿಗಳು ಓದುತ್ತಾರೆ.

ಎರಡನೇ ಸೆಮಿಸ್ಟರ್
• ಹೊಸಗನ್ನಡ ಸಾಹಿತ್ಯ ಚರಿತ್ರೆಯನ್ನು ಓದಿಸುವ ಕೆಲಸ ಈ ಹಂತದಲ್ಲಿ ನಡೆಯುತ್ತದೆ. ಕವಿತೆ, ಕತೆ, ಕಾದಂಬರಿ , ನಾಟಕ ಮುಂತಾದ ಸಾಹಿತ್ಯ ಪ್ರಕಾರಗಳ ಅಭ್ಯಾಸದ ಯೋಜನೆಯಿದೆ.
• ಗೀತಕಾವ್ಯಗಳು, ಮಹಾಕಾವ್ಯ, ನವೋದಯ , ನವ್ಯ ಕಾವ್ಯದ ಆಯ್ದ ಪಠ್ಯಗಳನ್ನು ಬೋಧಿಸಲಾಗುತ್ತದೆ. ಕುವೆಂಪು ಅವರ ‘ಮಹಾರಾತ್ರಿ’ ನಾಟಕವನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಪರಿಣಿತಿ ಸಾಧಿಸುತ್ತಾರೆ.

ಮೂರನೇ ಸೆಮಿಸ್ಟರ್

• ಕಾವ್ಯಮೀಮಾಂಸೆಯ ಶಾಸ್ತಿçÃಯ ಅಧ್ಯಯನವನ್ನು ವಿದ್ಯಾರ್ಥಿಗಳು ಈ ಹಂತದಲ್ಲಿ ಮಾಡುತ್ತಾರೆ. ಜೊತೆಗೇ ಹರಿಹರನ ರಗಳೆ , ರಾಘವಾಂಕನ ಷಟ್ಪದಿ ಹಾಗೂ ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ಯ ಭಾಗಗಳನ್ನು ಅಧ್ಯಯನ ಮಾಡುವಲ್ಲಿ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುತ್ತಾರೆ.

ನಾಲ್ಕನೇ ಸೆಮಿಸ್ಟರ್
• ನಡುಗನ್ನಡ ಕಾವ್ಯದ ಸವಿಯನ್ನು ಈ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಗಳು ಸವಿಯುತ್ತಾರೆ. ಜನ್ನನ ಯಶೋಧರ ಚರಿತೆ, ಚಾಮರಸನ ಪ್ರಭುಲಿಂಗಲೀಲೆಯ ಆಯ್ದಭಾಗಗಳನ್ನು ಅಭ್ಯಾಸ ಮಾಡುತ್ತಾರೆ.
• ಪಾಶ್ಚಾತ್ಯ ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆಯ ಕೆಲವು ತತ್ವಗಳು ಪಠ್ಯದ ಭಾಗಗಳಾಗಿದ್ದು ವಿದ್ಯಾರ್ಥಿಗಳ ಅಧ್ಯಯನ ಜಾಗತಿಕ ಸಾಹಿತ್ಯದ ಕಡೆಗೂ ಹೊರಳುತ್ತದೆ.

ಐದನೇ ಸೆಮಿಸ್ಟರ್
ಪತ್ರಿಕೆ -೫ –
• ಹಳಗನ್ನಡ ವ್ಯಾಕರಣವನ್ನು ಅಧ್ಯಯನ ಮಾಡಿಸುವುದು ಮತ್ತು ಈ ಮೂಲಕ ವಿದ್ಯಾರ್ಥಿಗಳಲ್ಲಿ ಭಾಷೆಯ ಮೂಲ ಅರಿವನ್ನು ಮೂಡಿಸುವುದು ಈ ಹಂತದ ಉದ್ದೇಶ. ಅದಕ್ಕಾಗಿ ಕೇಶೀರಾಜನ ಶಬ್ದಮಣಿದರ್ಪಣವನ್ನು ಈ ಭಾಗದಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡುವುದರೊಂದಿಗೆ ವ್ಯಾಕರಣ ಪರಿಣತಿ ಸಾಧಿಸುತ್ತಾರೆ.
• ಜೊತೆಗೆ ಆಧುನಿಕ ಪೂರ್ವ ಕನ್ನಡವನ್ನು ಅಂದರೆ ವಡ್ಡಾರಾಧನೆ , ರಾಮಾಶ್ವಮೇಧ , ಮುದ್ರಾಮಂಜೂಷದ ಕತೆಗಳ ಮೂಲಕ ಇಡೀ ಪಠ್ಯದ ಪ್ರವೇಶ ಸಾಧ್ಯವಾಗುತ್ತದೆ.
ಪತ್ರಿಕೆ – ೬
• ಶಾಸನಗಳ ಅಭ್ಯಾಸವನ್ನು ಈ ಹಂತದಲ್ಲಿ ವಿದ್ಯಾರ್ಥಿಗಳು ಮಾಡುತ್ತಾರೆ. ರಾಮಧಾನ್ಯಚರಿತೆ , ಕನಕದಾಸ – ಪುರಂದರದಾಸರ ಕೀರ್ತನೆಗಳು , ಛಂದಸ್ಸು ಹಾಗೂ ಸಂಸ್ಕೃತಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿರುವದರಿಂದ ವಿದ್ಯಾರ್ಥಿಗಳು ಸಾಹಿತ್ಯದ ಓದಿನ ಹಿಡಿತ ಸಾಧಿಸುತ್ತಾರೆ.

ಆರನೇ ಸೆಮಿಸ್ಟರ್
ಪತ್ರಿಕೆ – ೭
• ಇದರಲ್ಲಿ ವಿದ್ಯಾರ್ಥಿಗಳು ಭಾಷಾಶಾಸ್ತç , ಮಹಿಳಾ ಅಧ್ಯಯನದ ಜೊತೆಗೆ ಭಾರತೀಯ ಅನುವಾದಿತ ಕಥಾಸಾಹಿತ್ಯದ ಬಗ್ಗೆ ಅಧ್ಯಯನ ಮಾಡುತ್ತಾರೆ.
• ಬೇರೆ ಬೇರೆ ಸಾಹಿತ್ಯದ ಸಂವೇದನೆಗಳನ್ಯ ಗುರುತಿಸಲು ವಿದ್ಯಾರ್ಥಿಗಳಿಗೆ ಇದು ಪ್ರೇರಣೆ ನೀಡುತ್ತದೆ.
ಪತ್ರಿಕೆ – ೮
• ಹೊಸಗನ್ನಡ ಗದ್ಯವನ್ನು ವಿದ್ಯಾರ್ಥಿಗಳು ಈ ಹಂತದಲ್ಲಿ ಅಭ್ಯಾಸ ಮಾಡುತ್ತಾರೆ. ತೌಲನಿಕ ಅಧ್ಯಯನ , ಆತ್ಮಕಥನದÀ ಅಭ್ಯಾಸ ಜೊತೆಯಲ್ಲೇ ಸಾಗುತ್ತದೆ. ಶಿವರಾತ್ರಿ , ತಲೆದಂಡ ನಾಟಕದ ತೌಲನಿಕ ಅಧ್ಯಯನ , ಮಣೆಗಾರ ಆತ್ಮಕಥನ , ಅಜ್ಞಾತನೊಬ್ಬನ ಆತ್ಮಚರಿತ್ರೆ ಕಾದಂಬರಿಯನ್ನು ಪಠ್ಯವಾಗಿ ಅಭ್ಯಾಸ ಮಾಡಿಸಲಾಗುತ್ತದೆ. ಇದರ ಮೂಲಕ ಕನ್ನಡ ಸಾಹಿತ್ಯದ ಅಗಾಧತೆ , ಆಳ , ಅಗಲಗಳ ಜ್ಞಾನವನ್ನು ವಿದ್ಯಾರ್ಥಿಗಳು ಪಡೆಯುತ್ತಾರೆ.